ಸಕಲೇಶಪುರ, ಫೆಬ್ರವರಿ ೨೦:ರೋಟರಿ ಸಂಸ್ಥೆ ಹಾಗೂ ಎಮ್.ಎಸ್ ರಾಮಯ್ಯ, ನಾರಾಯಣ ಹೃದಯಾಲಯ ಹಾರ್ಟ ಸೆಂಟರ್ ಬೆಂಗಳೂರು ಆಶ್ರಯದಲ್ಲಿ ಉಚಿತ ಹೃದ್ರೋಗ ಮತ್ತು ಮಧುಮೇಹ ತಪಾಸಣಾ ಶಿಬಿರವನ್ನು ಪೆ.೨೧ ರಂದು ಬೆಳಗ್ಗೆ ೯ರಿಂದ ಮದ್ಯಾಹ್ನ ೧ ರವರೆಗೆ ಪಟ್ಟಣದ ರೋಟರಿ ಸಮುದಾಯಭವನ(ಕ್ರಾಫರ್ಡ ಆಸ್ಪತ್ರೆ ಎದುರು)ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ. ಕಿಶೋರ್ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಶಿಬಿರದಲ್ಲಿ ಉಚಿತವಾಗಿ ಹೃದಯ ತಪಾಸಣೆ, ಇಸಿಜಿ ಮತ್ತು ಎಕೋಸ್ಕಾನಿಂಗ್ ಮಾಡಲಾಗುವುದು ಎಂದು ಹೇಳಿದರು.
ಶಿಬಿರದಲ್ಲಿ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದವರಿಗೆ ರಿಯಾಯಿತಿ ದರದಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಲಾಗುವುದು, ಯಶಸ್ವಿನಿ ಕಾರ್ಡ, ಸುವರ್ಣ ಆರೋಗ್ಯ ಚೈತನ್ಯ ಹೊಂದಿದವರಿಗೆ ಮತ್ತು ಮಕ್ಕಳಿಗೆ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗುವುದು ಎಂದರು. ಈ ಹಿಂದೆ ನಡೆದ ಸೀಳು ತುಟಿ ಶಿಬಿರದಲ್ಲಿ ನಾಲ್ಕು ಜನರಿಗೆ ೪ ರಿಂದ ೫ ಲಕ್ಷ ರೂ ವೆಚ್ಚದಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ ಎಂದು ತಿಳಿಸಿದ ಅವರು ತಾಲ್ಲೂಕಿನ ಜನತೆ ಈ ಸಂದರ್ಭವನ್ನು ಉಪಯೋಗಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ರೋಟರಿ ಸಂಸ್ಥೆಯ ರಜಿನಿಕಾಂತ್, ರವಿಕಿರಣ್ ಇದ್ದರು.